ಸಮಗ್ರ ಸುದ್ದಿ

ಚಂದ್ರನಿಗೆ ಮುತ್ತಿಕ್ಕುವ ರಷ್ಯಾದ ಕನಸು ಭಗ್ನ!

Share it

ಮಾಸ್ಕೋ: ಭಾರತದ ಚಂದ್ರಯಾನ-3 ಗಿಂತ (Chandrayaan-3) ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಇಳಿಯುವ ರಷ್ಯಾದ ಕನಸು ಭಗ್ನಗೊಂಡಿದೆ. ಚಂದ್ರನ ಮೇಲ್ಮೆನಲ್ಲಿ ಲ್ಯಾಂಡ್‌ ಆಗಬೇಕಿದ್ದ ಲೂನಾ-25 ಚಂದ್ರನ ಮೇಲೆ ಪೂರ್ವ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸಲು ವಿಫಲವಾಗಿ ಪತನಗೊಂಡಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ಅಧಿಕೃತವಾಗಿ ಈ ವಿಚಾರವನ್ನು ತಿಳಿಸಿದೆ. ರೋಬೋಟಿಕ್ ಬಾಹ್ಯಾಕಾಶ ನೌಕೆಯು ಶನಿವಾರ ಚಂದ್ರನ ಅಂಗಳಕ್ಕೆ ಇಳಿಯಬೇಕಿತ್ತು. ಆದರೆ ಕೊನೆಯ ಹಂತದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಆಗಬೇಕಿದ್ದ ನೌಕೆ ಚಂದ್ರನ ಅಂಗಳಕ್ಕೆ ಅಪ್ಪಳಿಸಿ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ರೋಸ್ಕೋಸ್ಮೊಸ್  ಹೇಳಿದೆ 

ಆಗಸ್ಟ್ 10 ರಂದು ರಷ್ಯಾ ಲೂನಾ-25 ಗಗನ ನೌಕೆಯನ್ನು ಉಡಾವಣೆ ಮಾಡುವ ಮೂಲಕ ನಾಸಾ ಹಾಗೂ ಇತರ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿದಿತ್ತು. ಆಗಸ್ಟ್ 21 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ನಿರ್ಧರಿಸಲಾಗಿತ್ತು. ಸುಮಾರು 50 ವರ್ಷಗಳ ಬಳಿಕ ಉಡಾವಣೆ ಮಾಡಿದ ಮೊದಲ ಚಂದ್ರಯಾನ ನೌಕೆ ಲೂನಾ- 25,ಚಂದ್ರನಲ್ಲಿ ನಿಗದಿಯಲ್ಲಿ ಇಳಿಯುವ ಮುನ್ನ ಸೇರಬೇಕಾದ ಕಕ್ಷೆಯನ್ನು ಪ್ರವೇಶಿಸುವಲ್ಲಿ ವಿಫಲವಾಗಿದೆ.

ಭಾರತ ಚಂದ್ರಯಾನ-3 ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಈ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. ಆಗಸ್ಟ್ 23ರಂದು ಚಂದ್ರಯಾನ ನೌಕೆ  ಚಂದ್ರನ ಮೇಲೆ ಇಳಿಯಲಿದೆ.


Share it

You cannot copy content of this page