ಸಮಗ್ರ ಸುದ್ದಿ

ರಾಜ್ಯದ ಅತ್ಯುತ್ತಮ ಗ್ರಾಮ ಪಂಚಾಯ್ತಿಗೆ ಸಚಿವ ಪ್ರಿಯಾಂಕ ಖರ್ಗೆ ಭೇಟಿ….ಯಾವುದು ಗೊತ್ತಾ ಆ ಪಂಚಾಯ್ತಿ…?

Share it

ದೇವನಹಳ್ಳಿ: ರಾಜ್ಯದ ನಿರ್ಮಲ ಪುರಸ್ಕಾರ ಹಾಗೂ ಅತ್ಯುತ್ತಮ ಗ್ರಾಮ ಪಂಚಾಯ್ತಿಗೆ ಸಚಿವ ಪ್ರಿಯಾಂಕ ಖರ್ಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಂದಹಾಗೆ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಜಾಲ ಗ್ರಾಮ ಪಂಚಾಯ್ತಿಗೆ ಪ್ರಿಯಾಂಕ ಖರ್ಗೆ ಭೇಟಿ ನೀಡಿ ಗ್ರಾಮ ಪಂಚಾಯ್ತಿಯಲ್ಲಿ ಅಳವಡಿಸಿಕೊಂಡಿರೋ ಸ್ಕಿಂ ಗಳ ಬಗ್ಗೆ ಮಾಹಿತಿ ಪಡೆದರು. ಇನ್ನೂ ಗ್ರಾಮ ಪಂಚಾಯ್ತಿಯ ಎಲ್ಲಾ ಗ್ರಾಮಗಳಲ್ಲಿ ಸಿಸಿಟಿವಿ, ಘನ ತ್ಯಾಜ್ಯ ವಿಲೇವಾರಿ, ನಮ್ಮ ಮೆಡಿಕಲ್ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಅಲ್ಲದೆ ದೊಡ್ಡಜಾಲ ಗ್ರಾಮ ಪಂಚಾಯ್ತಿ ಸದಸ್ಯರ ಕಾರ್ಯಕ್ಕೆ ಸಚಿವರ ಮೆಚ್ಚುಗೆ ಸೂಚಿಸಿ ಗ್ರಾಮ ಪಂಚಾಯ್ತಿ ಎಲ್ಲಾ ಕಡೆ ಸ್ಚಚ್ಚತೆ, ಘನ ತ್ಯಾಜ್ಯ, ಇಂಗು ಗುಂಡಿಗಳು, ಸಿಸಿಟಿವಿ ಸೇರಿದಂತೆ ಹಲವು ಕಾರ್ಯಗಳ ಮಾಡಿರೋ ಸದಸ್ಯರಿಗೆ ಅಭಿನಂದಿಸಿದ್ರು.

ಇನ್ನೂ ಪ್ರಮುಖವಾಗಿ ರಿಯಾಯಿತಿ ದರದಲ್ಲಿ ಪಂಚಾಯ್ತಿಯಿಂದ ನಮ್ಮ ಮೆಡಿಕಲ್ ತೆರೆದಿದ್ದು ಎಲ್ಲಾರಿಗೂ ಉಪಯುಕ್ತವಾಗ್ತಿದೆ. ಈ ನಮ್ಮ ಮೆಡಿಕಲ್ ಎನ್ನುವ ಕಾರ್ಯವನ್ನ ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿಯೂ ಮಾಡಲು ಸಚಿವ ಪ್ರಿಯಾಂಕ ಖರ್ಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಅಧಿಕಾರಿಗಳ ಬಳಿ ದೊಡ್ಡಜಾಲ ನಮ್ಮ ಮೆಡಿಕಲ್ ಬಗ್ಗೆ ಮಾಹಿತಿಯನ್ನ ಪಡೆದರು. ಇನ್ನೂ ಸಚಿವರು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ ಹಿನ್ನಲೆ ಈ ಮಟ್ಟಕ್ಕೆ ಪಂಚಾಯ್ತಿ ಅಭಿವೃದ್ದಿ ಮಾಡಿದ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್ಕುಮಾರ್ ಸಂತಸವನ್ನ ವ್ಯಕ್ತಪಡಿಸಿದ್ರು. ಈ ವೇಳೆ ದೊಡ್ಡಜಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬೈರೇಗೌಡ ಸೇರಿದಂತೆ ಸದಸ್ಯರು ಹಾಜರಿದ್ರು.


Share it

You cannot copy content of this page