ಹೊಸಕೋಟೆ:
ಅವರೆಲ್ಲಾ ಬೆಂಗಳೂರು ನಗರದಲ್ಲಿ ಹಲವು ಕಂಪನಿಯಲ್ಲಿ ಕೆಲಸ ಹಾಗೂ ಬ್ಯೂಸಿನೆಸ್ ಮಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಒಂದು ಸೈಟ್ ತೆಗೆದುಕೊಂಡು, ಕನಸಿನ ಮನೆಯನ್ನ ಕಟ್ಟಬೇಕು ಅಂತಾ ಕೊಟ್ಯಾಂತರ ಬಂಡವಾಳ ಹಾಕಿ ನಿವೇಶನ ಖರಿದೀ ಮಾಡಿದ್ದಾರೆ. ಆದ್ರೆ ಆರಂಭದಲ್ಲಿ ಇದ್ದ ರಸ್ತೆಯನ್ನ ಚೈನೈ ಕಾರಿಡಾರ್ ಎಕ್ಸ್ಪ್ರೇಸ್ವೆಗೆ ಹೆದ್ದಾರಿ ಪ್ರಾಧಿಕಾರ ಮುಚ್ಚಿಹಾಕಿ ಬಂದ್ ಮಾಡಿದ್ದು, ಸುಮಾರು 400 ಟೆಕ್ಕಿಗಳು ರಸ್ತೆಗಾಗಿ ಧರಣಿ, ಪ್ರತಿಭಟನೆಗೆ ಇಳಿದಿದ್ದಾರೆ. ಅಂದಹಾಗೆ ಎನ್ಹೆಚ್ಎಐ ಡಾಬಸ್ಪೇಟೆಯಿಂದ ಹೊಸಕೋಟೆವರೆಗೂ ನಾಲ್ಕು ಪಥದ ರಸ್ತೆ ಕಾಮಗಾರಿ ಹಾಗೂ ಹೊಸಕೋಟೆಯಿಂದ ಚೈನೈ ಎಕ್ಸ್ಪ್ರೇಸ್ ಕಾರಿಡಾರ್ ಕಾಮಗಾರಿ ನಡೆಸುತ್ತಿದೆ. ಇದೇ ಕಾಮಗಾರಿ ನಡೆಸುತ್ತಿರೋ ಕೊಳತ್ತೂರು ಗ್ರಾಮದ ಹೆದ್ದಾರಿ ಸಂಪರ್ಕ ಕಾರಿಡರ್ ಬಳಿ ಬೆಂಗಳೂರಿನ ಟೆಕ್ಕಿಗಳು ಹಾಗೂ ಬ್ಯೂಸಿನೆಸ್ ಮ್ಯಾನ್ಗಳು ಆದಿತ್ಯಾ ಗ್ರ್ಯಾಂಡ್ ಪ್ಲಾಟ್ಸ್ಗಳನ್ನ ಖರೀದಿಸಿದ್ದಾರೆ. ಸುಮಾರು 400 ಕುಟುಂಬಗಳು ಕೊಟ್ಯಾಂತರ ಬಂಡವಾಳ ಹಾಕಿ ನಿವೇಶನ ಖರೀದಿ ಮಾಡಿದ್ದು, ಇದೀಗ ರಸ್ತೆ ಕಾಮಗಾರಿ ಮಾಡ್ತಿರೋ ಹೆದ್ದಾರಿ ಪ್ರಾಧಿಕಾರ ಬಡಾವಣೆಗೆ ತೆರಳುವ ರಸ್ತೆಯನ್ನ ಬಂದ್ ಮಾಡಿದೆ. ಇದ್ರಿಂದಾಗಿ ಸುಮಾರು 400 ನಿವೇಶನ ಖರೀದಿಸಿರೋ ಟೆಕ್ಕಿಗಳು ಗರಂ ಹಾಗಿದ್ದು ಸ್ಥಳದಲ್ಲಿ ಪೆಂಡಲ್ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ.