ದೊಡ್ಡಬಳ್ಳಾಪುರ: ಕುಡಿದು ಬಂದು ಮನೆಯಲ್ಲಿ ನಿತ್ಯ ಮಗನಿಂದ ಕಿರುಕುಳಕ್ಕೆ ತಾಳಲಾರದೇ ಕುಡುಕ ಮಗನನ್ನ ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಆದರ್ಶ್ (28) ಕೊಲೆಯಾದ ಮಗ, ಜಯರಾಮಯ್ಯ (58) ಮಗನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ತಂದೆ. ಅಂದಹಾಗೆ ಕೊಲೆಯಾದ ಆದರ್ಶ್ ತಂದೆ ಜಯರಾಮಯ್ಯನಿಗೆ ಒಬ್ಬನೇ ಮಗನಾಗಿದ್ದಾನೆ. ಮಗ ಪ್ರತಿನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡಿ ತಂದೆಗೆ ಕಿರಕುಳ ನೀಡ್ತಿದ್ದ. ಖಾಲಿ ಪೊಲೀಗಳ ಜೊತೆ ಸೇರಿಕೊಂಡು ದಿನನಿತ್ಯ ನಶೆಯಲ್ಲಿ ಇರುತ್ತಿದ್ದ. ಆದ್ರೆ ಮಗನನ್ನ ಸರಿಯಾದ ದಾರಿಗೆ ತರಬೇಕು ಅಂತಾ ಪಣತೊಟ್ಟ ಅಪ್ಪ ಆದರ್ಶನನ್ನ ಮದ್ಯಪಾನ ವ್ಯಸನಿ ಮುಕ್ತ ಸೆಂಟರ್ನಲ್ಲಿ ಕುಡಿತ ಚಟ ಬಿಡಿಸಲು ಹಾಕಿದ್ದ.
ಆದ್ರೆ ಮನೆಗೆ ಬಂದವನು ಮತ್ತದೆ ಕುಡಿತದಿಂದ ತಂದೆ ಬಳಿ ಜಗಳ ಮಾಡುತ್ತಿದ್ದ ಮೂರು ದಿನಗಳ ಹಿಂದೆಯೂ ಕೂಡ ಅದೇ ರೀತಿ ಕುಡಿದವನು ತಂದೆಯ ಬಳಿ ಜಗಳ ಮಾಡಿದ್ದ. ಆದ್ರೆ ನೆನ್ನೆ ರಾತ್ರಿ ತಂದೆ ಮಗನ ಕುಡುತ ಅವಾಂತರಕ್ಕೆ ರೋಸಿ ಹೋಗಿ ಹೊಡೆದು, ತನ್ನ ತೋಟದ ಬಳಿ ಹಲಸಿನ ಮರಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಹಾಕಿ ಸುಟ್ಟು ಕೊಲೆಗೈದಿದ್ದಾನೆ. ಇನ್ನೂ ಈ ಸಂಭಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗನನ್ನ ಕೊಂದ ತಂದೆ ಜಯರಾಮಯ್ಯನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ತನಿಖೆಯನ್ನ ಮುಂದುವರೆಸಿದ್ದಾರೆ.